ಮಂಗಳೂರಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ
ಮಂಗಳೂರು: ನಗರದ ಮತ್ತೊಂದು ಕಡೆ ಗೋಡೆ ಬರಹವೊಂದು ಕಾಣಿಸಿಕೊಂಡಿರುವ ಮತ್ತಷ್ಟು ಆಂತಕಕ್ಕೆ ಕಾರಣವಾಗಿದೆ.
ನಗರದ ಪಿವಿಎಸ್ ಸಮೀಪದ ನ್ಯಾಯಾಲಯದ ಆವರಣದ ಹಳೆ ಕಟ್ಟಡದ ಗೋಡೆಯಲ್ಲಿ ಈ ಬರಹ ಕಂಡುಬಂದಿದೆ.
ಕೋರ್ಟ್ ಆವರಣದ ಜನರೇಟರ್ ಗೋಡೆಯ ಮೇಲೆ "Gustak e rasool ek hi saza tan say juda" ಎಂದು ಬರೆಯಲಾಗಿದೆ.
ಈ ಬಗ್ಗೆ ಬಂದರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಬಿಜೈನ ಅಪಾರ್ಟ್ಮೆಂಟ್ ವೊಂದರಲ್ಲಿ ಉಗ್ರರ ಪರ ಗೋಡೆ ಬರಹ ಕಾಣಿಸಿಕೊಂಡಿತ್ತು. ಪೊಲೀಸರು ಕಾರ್ಯಾಚರಣೆಗೆ ಇಳಿದ ಬೆನ್ನಲ್ಲೇ ಮತ್ತೊಂದು ಕಡೆ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.