ಅಂದರ್ ಬಾಹರ್: ಏಳು ಮಂದಿ ಬಂಧನ
ಕಾಪು, ನ.29: ಕಟಪಾಡಿ ಏಣಗುಡ್ಡೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ನ.28ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಮಂದಿ ಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಕಟಪಾಡಿ ಚೊಕ್ಕಾಡಿಯ ಪಾಂಡುರಂಗ(69), ಅಗ್ರಹಾರದ ನವೀನ್ (38), ರಂಜಿತ್(31), ಕೋಟೆಯ ಮನೋಜ್(38), ಜೆ.ಎನ್.ನಗರದ ರಾಕೇಶ್(35), ಕಟಪಾಡಿಯ ರಾಜೇಶ್(40), ಚರ್ಚ್ ರೋಡಿನ ಸಂತೋಷ್(45) ಬಂಧಿತ ಆರೋಪಿಗಳು. ಇವರಿಂದ 13850ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story