ಡಿ.30: ಸ್ಕಾಲರ್ಶಿಪ್ಗಾಗಿ ಚಲೋ
ಮಂಗಳೂರು, ನ.29: ಕೇಂದ್ರ ಮತ್ತು ರಾಜ್ಯ ಸರಕಾರವು ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಕೊಡದೆ ಸತಾಯಿಸುತ್ತಿದೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸ್ಕಾಲರ್ಶಿಪ್ ಕೊಡುವಂತೆ ಆಗ್ರಹಿಸಿ ಸಿಎಫ್ಐ ವತಿಯಿಂದ ಡಿ.30ರಂದು ಪೂ.11ಕ್ಕೆ ನಗರದ ಪಾಂಡೇಶ್ವರದಲ್ಲಿರುವ ವೌಲಾನ ಆಝಾದ್ ಭವನದಲ್ಲಿರುವ ಅಲ್ಪಸಂಖ್ಯಾತರ ಕಚೇರಿ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.
Next Story