ಮಾಸ್ಕ್ ಧರಿಸದವರಿಂದ 12,100ರೂ.ದಂಡ ವಸೂಲಿ
ಉಡುಪಿ, ಡಿ.2: ಕೋವಿಡ್-19 ನಿಯಂತ್ರಣಕ್ಕೆ ಸರಕಾರ ವಿಧಿಸಿದ ಮಾರ್ಗಸೂಚಿಗಳಂತೆ ಮಾಸ್ಕ್ ಧರಿಸದೇ, ಸುರಕ್ಷಿತಾ ಅಂತರ ಕಾಪಾಡದ ವರ ವಿರುದ್ಧ ಜಿಲ್ಲಾಡಳಿತದ ವತಿಯಿಂದ ಡಿ.1ರಂದು ಒಟ್ಟು 12,100ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಜಿಲ್ಲೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 45 ಮಂದಿಯಿಂದ 4,500ರೂ., ಜಿಲ್ಲೆಯ ಏಳು ತಾಲೂಕುಗಳ ಗ್ರಾಪಂ ವ್ಯಾಪ್ತಿ ಯಲ್ಲಿ 21ಮಂದಿಯಿಂದ 2100ರೂ., ಪೊಲೀಸ್ ಇಲಾಖೆಯ ಮೂಲಕ 52 ಮಂದಿಯಿಂದ 5,200ರೂ., ಕಂದಾಯ ಇಲಾಖೆಯಿಂದ ಮೂವರಿಂದ 300ರೂ. ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 121 ಮಂದಿಯಿಂದ 12,100ರೂ. ದಂಡ ವಸೂಲಿ ಮಾಡಲಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 16,102 ಮಂದಿಯಿಂದ 17,68,850 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story