ತಲಪಾಡಿ ಟೋಲ್ಗೇಟ್ ಸಮಸ್ಯೆ : ಡಿ.12ಕ್ಕೆ ಇಂಟೆಕ್ ವತಿಯಿಂದ ಪ್ರತಿಭಟನೆ
ಉಳ್ಳಾಲ : ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲಪಾಡಿ ಟೋಲ್ ಗೇಟ್ ಸಮಸ್ಯೆ ವಿರುದ್ಧ ಕಾರ್ಮಿಕ ಸಂಘಟನೆ ಇಂಟೆಕ್ ನಿಂದ ಡಿ. 12ರಂದು ಪ್ರತಿಭಟನೆ ನಡೆಯಲಿದೆ ಎಂದು ಯೂತ್ ಇಂಟೆಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೇಳಿದರು.
ತೊಕ್ಕೊಟ್ಟಿನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋರ್ಟ್ ಆದೇಶದ ಪ್ರಕಾರ ಪ್ರತಿಯೊಂದು ಟೋಲ್ಗೇಟ್ ಸ್ಥಳದಿಂದ 3 ಕಿ.ಮೀ. ತನಕ ಸ್ಥಳೀಯವಾಗಿ ವಾಸಿಸುವ ಚೀಟಿ ಪರಿಶೀಲಿಸುವುದರೊಂದಿಗೆ ಜನರ ವಾಹನಕ್ಕೆ ಉಚಿತವಾಗಿ ಪಾಸ್ ಕಳುಹಿಸತಕ್ಕದ್ದು. ಆದರೆ ತಲಪಾಡಿ ಟೋಲ್ಗೇಟ್ ನಲ್ಲಿ ತಲಪಾಡಿ ಪಂಚಾಯಿತಿಗೆ ಉಚಿತವಾಗಿ ಸೇವೆ ನೀಡುತ್ತಿದ್ದು ಈ ಸೇವೆಯನ್ನು 3 ಕಿ.ಮೀ. ಒಳಗಿನವರಿಗೆ ನೀಡತಕ್ಕದ್ದು ಎಂದು ಹೇಳಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರ ಇಂಟೆಕ್ ಅಧ್ಯಕ್ಷ ಹರೀಶ್ ರಾವ್, ಮಂಗಳೂರು ವಿಧಾನ ಸಭಾ ಕ್ಷೇತ್ರ ಯೂತ್ ಇಂಟೆಕ್ ಅಧ್ಯಕ್ಷ ಸಿದ್ಧಿಕ್ ಹಸನ್, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಯೂತ್ ಇಂಟೆಕ್ ಅಧ್ಯಕ್ಷ ಪುನೀತ್ ಶೆಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರ ಯೂತ್ ಇಂಟೆಕ್ ಪ್ರಧಾನ ಕಾರ್ಯದರ್ಶಿ ಮುನೀರ್ ಬಾವ, ಮಂಗಳೂರು ವಿಧಾನಸಭಾ ಕ್ಷೇತ್ರ ಯೂತ್ ಇಂಟೆಕ್ ಉಪಾಧ್ಯಕ್ಷ ಸಿರಾಜುದ್ದಿನ್, ಬ್ಲಾಕ್ ಕಾಂಗ್ರೆಸ್ ಜೊತೆ ಕಾರ್ಯದರ್ಶಿ ಮನ್ಸೂರ್ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರ ಯೂತ್ ಇಂಟೆಕ್ ಉಪಾಧ್ಯಕ್ಷ ಮುನೀಶ್ವರನ್ ಉಪಸ್ಥಿತರಿದ್ದರು.