ಡಿ.13: ಹಾವೇರಿಯ ‘ಮುಈನುಸುನ್ನಾ’ದಲ್ಲಿ ‘ಗೌಸುಲ್ ವರ’ ಕಾರ್ಯಕ್ರಮ
ಮಂಗಳೂರು, ಡಿ.3: ಹಾವೇರಿಯ ‘ಮುಈನುಸುನ್ನಾ’ ವಿದ್ಯಾಸಂಸ್ಥೆಯಲ್ಲಿ ಮುಈನುಸುನ್ನಾ ಓವರ್ಸೀಸ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಡಿ.13ರಂದು ‘ಗೌಸುಲ್ ವರ’ ಕಾನ್ಫರೆನ್ಸ್ ನಡೆಯಲಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಗಾರ ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಈನುಸುನ್ನಾ ವಿದ್ಯಾಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶಹೀರ್ ಅಲ್ಬುಖಾರಿ ಪೊಸೋಟ್ ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಈನುಸುನ್ನಾ ಓವರ್ಸಿಸ್ ಕೌನ್ಸಿಲ್ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಉಚ್ಚಿಲ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಈನುಸುನ್ನಾ ಪ್ರಧಾನ ಕಾರ್ಯದರ್ಶಿ ಕೆಎಂ ಮುಸ್ತಫಾ ನಈಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಕೆಸಿಎಫ್ ಐಎನ್ಸಿ ಅಧ್ಯಕ್ಷ ಅಲ್ಹಾಜ್ ಶೇಖ್ಬಾವ ಅಬುಧಾಬಿ ಉದ್ಘಾಟಿಸಲಿದ್ದಾರೆ.
ಸಯ್ಯಿದ್ ಮುನೀರ್ ಅಲ್ಅಹ್ದಲ್, ಸಯ್ಯಿದ್ ತ್ವಾಹ ಹಾಮಿದ್ ರಿಫಾಯಿ,ಕೆಎಂ ಅಬೂಬಕ್ಕರ್ ಸಿದ್ದೀಕ್, ಸಯ್ಯಿದ್ ಅತ್ಹರ್ ಸಖಾಫಿ ಸವಣೂರು ಭಾಷಣ ಮಾಡಲಿದ್ದಾರೆ. ಮುಈನುಸುನ್ನಾ ಸೌದಿ, ಯುಎಇ, ಒಮನ್, ಬಹ್ರೈನ್, ಕುವೈತ್, ಕತರ್ ಭಾಗವಹಿಸಲಿದ್ದಾರೆ ಎಂದು ಮುಈನುಸುನ್ನಾ ಓವರ್ಸೀಸ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಕಮಾಲುದ್ದೀನ್ ಅಂಬ್ಲಮೊಗರು ಶಾರ್ಜಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.