ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಆನ್ಲೈನ್ ಕಾರ್ಯಕ್ರಮ
ಉಡುಪಿ, ಡಿ.3: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮಹಿಳಾ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ತಡೆಯುವ ಸಮಿತಿಯ ವತಿಯಿಂದ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಮತ್ತು ಅದರ ಅರಿವು ಮೂಡಿಸುವಿಕೆ ಕುರಿತು ವಿದ್ಯಾರ್ಥಿಗಳಿಗೆ ಗೂಗಲ್ ಮೀಟ್ನಲ್ಲಿ ಆನ್ಲೈನ್ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೋಟ ಪೋಲಿಸ್ ಠಾಣೆಯ ಎಎಸ್ಸೈ ಮುಕ್ತಾ ಬಾ, ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ಐಕ್ಯೂಎಸಿ ನಿರ್ದೇಶಕ ಜಯರಾಮ್ ಶೆಟ್ಟಿಗಾರ್ ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಸಂಯೋಜಕರಾದ ರಾಧಿಕಾ ಪಾಟ್ಕರ್, ಅನುಪಮಾ ಉಪಸ್ಥಿತರಿದ್ದರು. ನಿಶ್ಮಿತಾ ವಂದಿಸಿ, ಇಂಚರಾ, ತೃತೀಯ ಬಿಸಿಎ ಹಾಗೂ ಇಂಚರಾ, ತೃತೀಯ ಬಿ.ಕಾಂ. ಕಾರ್ಯಕ್ರಮ ನಿರೂಪಿಸಿದರು.
Next Story