ನಂದರಬೆಟ್ಟು ಮಸೀದಿಯ ನೂತನ ಅಧ್ಯಕ್ಷ ರಾಗಿ ಇಕ್ಬಾಲ್ ಎನ್.ಬಿ.ಆಯ್ಕೆ
ಬಿ.ಸಿ.ರೋಡ್ : ಡಿ.15, ಇಲ್ಲಿಗೆ ಸಮೀಪದ ನಂದರಬೆಟ್ಟು ಅನ್ಸಾರಿಯಾ ಇಸ್ಲಾಮಿಕ್ ಮದರಸ ಹಾಗು ಮದೀನಾ ಮಸೀದಿ (ರಿ) ಇದರ ನೂತನ ಅಧ್ಯಕ್ಷರಾಗಿ ಎನ್.ಬಿ.ಮಹಮ್ಮದ್ ಇಕ್ಬಾಲ್ ಆಯ್ಕೆಯಾಗಿದ್ದಾರೆ.
ರಝಾಕ್ ಎಸ್.ಎ.ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಅಹಮ್ಮದ್ ಕುಂಞಿ, ಅಬ್ದುಲ್ಲಾ (ಬಾವಾಕ) ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಎಸ್.ಎ, ಜೊತೆ ಕಾರ್ಯದರ್ಶಿಯಾಗಿ ಸಗೀರ್ ಅಹ್ಮದ್ ಹಾಗೂ ಸಾದೀಕ್ ಆಲಿ, ಕೋಶಾಧಿಕಾರಿಯಾಗಿ ಹನೀಫ್ ಮುಸ್ಲಿಯಾರ್, ಲೆಕ್ಕಪರಿಶೋಧಕರಾಗಿ ಇಕ್ಬಾಲ್(ಮೈನ್ಸ್) ಅವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಶರೀಫ್ ಕಾಂಟ್ರಾಕ್ಟರ್, ರಝಾಕ್ ಎನ್.ಎ, ಅಶ್ರಫ್ ಜಿ.ಕೆ, ಮಹಮ್ಮದ್ ಪಿಕಪ್, ಅಬೂಸಾಲಿ, ಇಶಾಕ್, ಮಜೀದ್ ಎನ್.ಯು, ನಿಯಾಝ್, ನಿಝಾಮ್, ಜಾಫರ್, ನೌಷಾದ್, ಅಶ್ರಫ್ ಕೈಕುಂಜೆ, ಇಜಾಝ್, ಸಾದೀಕ್, ಅನ್ಸಾರ್, ಪಯಾಝ್ ಇವರನ್ನು ನೇಮಿಸಲಾಯಿತು.
Next Story