ಸ್ಕೂಟರ್ ಕಳವು
ಬ್ರಹ್ಮಾವರ, ಡಿ.16: ಹಂದಾಡಿ ಗ್ರಾಮದ ಬ್ರಹ್ಮಾವರದ ಗುಡ್ಡಿ ಬಾರಿನ ಹೊರಗಡೆ ಡಿ.15ರಂದು ರಾತ್ರಿ ವೇಳೆ ಕೀ ಸಮೇತ ನಿಲ್ಲಿಸಿದ್ದ ಚಾಂತಾರು ತೆಂಕಬೆಟ್ಟು ನಿವಾಸಿ ನಿತ್ಯಾನಂದ ಪೂಜಾರಿ ಎಂಬವರ 10 ಸಾವಿರ ರೂ. ಮೌಲ್ಯದ ಕೆಎ-20-ಡಬ್ಲು-0953 ನಂಬರಿನ ಕಡು ಬೂದು ಬಣ್ಣದ ಹೊಂಡಾ ಆ್ಯಕ್ಟಿವ್ ಸ್ಕೂಟರನ್ನು ಕಳ್ಳರು ಕಳವು ಮಾಡಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story