ಸೈಂಟ್ ಮೇರಿ ದ್ವೀಪ : ನೀರಿನಲ್ಲಿ ಮುಳುಗಿ ಪ್ರವಾಸಿಗ ಮೃತ್ಯು
ಮಲ್ಪೆ : ಇಲ್ಲಿನ ಸೈಂಟ್ ಮೇರಿ ದ್ವೀಪದಲ್ಲಿ ಪ್ರವಾಸಿಯೋರ್ವರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಬೆಂಗಳೂರು ಕನಕಪುರ ನಿವಾಸಿ ಮಹೇಶ್ (43) ಮೃತರು ಎಂದು ಗುರುತಿಸಲಾಗಿದೆ.
ಅವರು ಪತ್ನಿ, ಇಬ್ಬರು ಮಕ್ಕಳೊಂದಿಗೆ ಮಲ್ಪೆ ಸೈಂಟ್ ಮೇರಿ ದ್ವೀಪಕ್ಕೆ ವಿಹಾರಕ್ಕಾಗಿ ಬಂದಿದ್ದರು. ಜೈ ಹನುಮಾನ್ ಬೋಟಿನ ಸಿಬ್ಬಂದಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಿ ಉಡುಪಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಆದಾಗಲೇ ಅವರು ಮೃತಪಟ್ಟಿದ್ದರು ಎಂದು ದೂರಲಾಗಿದೆ.
Next Story