ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ಅಕಾಲಿಕ ಮಳೆ
ಬೆಳ್ತಂಗಡಿ: ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ವಿವಿಧೆಡೆ ರವಿವಾರ ಸಂಜೆ ಗಾಳಿ, ಗಡುಗು ಸಹಿತ ಅಕಾಲಿಕ ಮಳೆ ಸುರಿಯುತ್ತಿದೆ.
ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆ ಗಾಳಿ, ಗುಡುಗು ಸಹಿತ ಮಳೆ ಬಂದಿದೆ.
ಬೆಳ್ತಂಗಡಿ, ಉಜಿರೆ, ಮುಂಡಾಜೆ, ಕಕ್ಕಿಂಜೆ, ಧರ್ಮಸ್ಥಳ, ಶಿಶಿಲ, ಅರಸಿನಮಕ್ಕಿ ಮೊದಲಾದ ಕಡೆ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಅಡಕೆ, ರಬ್ಬರ್ ಸಹಿತ ಇತರ ಕೃಷಿಗೆ ಸಮಸ್ಯೆಯಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ.
ಕಡಬ ತಾಲೂಕಿನ ವಿವಿಧೆಡೆ ರವಿವಾರ ಸಂಜೆ ವೇಳೆ ಮಳೆ ಸುರಿದಿದೆ.
ಕಡಬದಲ್ಲಿ ಸಾಧಾರಣ ಮಳೆಯಾದರೆ, ಇಚಿಲಂಪಾಡಿ, ನೂಜಿಬಾಳ್ತಿಲ, ಬಿಳಿನೆಲೆ, ಸುಬ್ರಹ್ಮಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಆಲಂಕಾರು, ಕೊಯಿಲ, ಸವಣೂರು ಭಾಗದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ.
Next Story