ರಿಯಾದ್: ಐಎಫ್ಎಫ್ ವತಿಯಿಂದ ರಕ್ತ ದಾನ ಶಿಬಿರ
ರಿಯಾದ್ : ಸಾಮಾಜಿಕ ಬದ್ಧತೆಗೆ ಮಾದರಿಯಾಗಿ ಇಂಡಿಯಾ ಫ್ರಟರ್ನಿಟಿ ಫೋರಂ (ಐಎಫ್ಎಫ್)ಹೊಸ ವರ್ಷ 2021ರ ಮೊದಲ ದಿನ ರಕ್ತದಾನ ಶಿಬಿರ ನಡೆಸಿತು.
ರಕ್ತದಾನ ಶಿಬಿರವನ್ನು ಐಎಫ್ಎಫ್, ಶಿಫಾ ಏರಿಯಾ ರಿಯಾದ್ ಹಾಗೂ ರಬುವಾದ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಆಸ್ಪತ್ರೆ ಜಂಟಿಯಾಗಿ ಆಯೋಜಿಸಿವೆ. ಶಿಫಾ ಪ್ರದೇಶದಲ್ಲಿ ಫೋರಂ ಸ್ವಯಂ ಸೇವಕರು ಹಾಗೂ ಅವರ ಸ್ನೇಹಿತರು ಸಹಿತ ಸುಮಾರು 35 ಮಂದಿ ರಕ್ತ ದಾನ ಮಾಡಿದರು.
ಫ್ರಟರ್ನಿಟಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿದ್ದು, ವಲಸಿಗರ ನಡುವೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
Next Story