ಪ್ರವಾಸಿ ಬೋಟು ಚಲಾಯಿಸಿ ಗಮನ ಸೆಳೆದ ಉಡುಪಿ ಜಿಲ್ಲಾಧಿಕಾರಿ !
ಉಡುಪಿ, ಜ.10: ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೋಟ್ ಹೌಸ್ನಲ್ಲಿ ಇಂದು ಪ್ರಯಾಣ ಬೆಳೆಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕೆಲಕಾಲ ಬೋಟ್ ಚಲಾಯಿಸುವ ಮೂಲಕ ಗಮನ ಸೆಳೆದರು.
ರಜಾ ದಿನವಾಗಿರುವ ರವಿವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಕೆಮ್ಮಣ್ಣು ಹೂಡೆಯಲ್ಲಿರುವ ಬೋಟ್ ಹೌಸ್ನಲ್ಲಿ ತನ್ನ ಕುಟುಂಬದೊಂದಿಗೆ ಪ್ರಯಾಣ ಮಾಡಿದರು. ಬ್ಯಾಕ್ ವಾಟರ್ನಲ್ಲಿ ಹಲವು ಸಮಯ ಕಳೆದ ಜಿಲ್ಲಾಧಿಕಾರಿ, ಕೆಲ ಹೊತ್ತು ಈ ಪ್ರವಾಸಿ ಬೋಟನ್ನು ಚಲಾಯಿಸಿದರು.
ಬೋಟು ಚಾಲಕನ ನಿರ್ದೇಶನದಂತೆ ಡಿಸಿ ಕೆಲವು ದೂರ ಬೋಟು ಚಾಲನೆ ಮಾಡುವ ಮೂಲಕ ಗಮನ ಸೆಳೆದರು. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಸ್ ಆಗಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಡಿಸಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಬೋಟ್ಹೌಸ್ಗಾಗಿ ಪ್ರವಾಸಿಗರು ದೂರದ ಕೇರಳ ಸೇರಿದಂತೆ ಇತರೆ ರಾಜ್ಯಗಳಿಗೆ ಹೋಗಬೇಕಾದ ಅಗತ್ಯ ಇಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.