ಕಕ್ಕಿಂಜೆ : ನದಿಯಲ್ಲಿ ಮುಳುಗಿ ಬಾಲಕ ಮೃತ್ಯು
ಬೆಳ್ತಂಗಡಿ : ಕಕ್ಕಿಂಜೆ ಸನಿಹದ ಚಿಬಿದ್ರೆ ಗ್ರಾಮದ ಅನ್ನಾರು ನದಿಯಲ್ಲಿ ಮುಳುಗಿ ಬಾಲಕ ಮೃತಪಟ್ಟ ಘಟನೆ ರವಿವಾರ ನಡೆದಿದೆ.
ಚಿಕ್ಕಮಗಳೂರಿನಿಂದ ಅಜ್ಜಿ ಮನೆಗೆ ಬಂದಿದ್ದ ಎಂಟರ ಹರೆಯದ ಬಾಲಕ ಇನಾಯತುಲ್ಲಾ ಮೃತ ಬಾಲಕ.
ಅಜ್ಜಿಗೆ ಅನಾರೋಗ್ಯ ಇದ್ದುದರಿಂದ ತಂದೆ , ತಾಯಿ ಜೊತೆ ರವಿವಾರ ಬಾಲಕ ಕಕ್ಕಿಂಜೆಗೆ ಬಂದಿದ್ದು, ಉಪಹಾರ ಮುಗಿಸಿ ಮನೆಮಂದಿ ಎಲ್ಲರೂ ಜೊತೆ ಸೇರಿ ಎಂದಿನಂತೆ ಮನೆಯ ಪಕ್ಕದಲ್ಲೇ ಇರುವ ನದಿಗೆ ಬಟ್ಟೆಬರೆ ಒಗೆಯಲು ಮತ್ತು ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ನದಿ ಪಾತ್ರದಲ್ಲಿ ಆಟದಲ್ಲಿ ನಿರತನಾಗಿದ್ದ ಬಾಲಕ ಎಲ್ಲರ ಕಣ್ಣ ಮುಂದೆಯೇ ಆಯತಪ್ಪಿ ನೀರಿನಲ್ಲಿ ಮುಳುಗಿದ್ದು, ತಕ್ಷಣ ಬಾಲಕನನ್ನು ನೀರಿನಿಂದ ಮೇಲೆತ್ತಿ ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲಿಂದ ಬೆಳ್ತಂಗಡಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story