ಮಂಜನಾಡಿ ಪ್ರೀಮಿಯರ್ ಲೀಗ್: ಹ್ಯಾಪಿ ಗಯ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ
ಗುಳಿಮನೆ ವಾರಿಯರ್ಸ್ ರನ್ನರ್ ಅಪ್
ಮಂಜನಾಡಿ: ಮಂಜನಾಡಿ ಪ್ರೀಮಿಯರ್ ಲೀಗ್ ನ ಆರನೇ ಆವೃತ್ತಿಯ ಕ್ರಿಕೆಟ್ ಲೀಗ್ ಪಂದ್ಯಾಟವು ಇಲ್ಲಿನ ಬಾಕಿಮಾರ್ ಮೈದಾನದಲ್ಲಿ ನಡೆಯಿತು.
2 ದಿನ ನಡೆದ ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು, ಫೈನಲ್ ನಲ್ಲಿ ಹ್ಯಾಪಿ ಗಯ್ಸ್ ತಂಡವು ಗೆಲ್ಲುವ ಮೂಲಕ ನಗದು ಮತ್ತು ಎಂಪಿ ಎಲ್ ಟ್ರೋಪಿ ತನ್ನದಾಗಿಸಿದೆ.
ಇನ್ನು ಗುಳಿಮನೆ ವಾರಿಯರ್ಸ್ ತಂಡವು ದ್ವಿತೀಯ ಸ್ಥಾನ ಪಡೆದು ನಗದು ಮತ್ತು ಎಂಪಿ ಎಲ್ ಟ್ರೋಪಿ ಪಡೆದು ನಗೆ ಬೀರಿದೆ.
ಇದೇ ವೇಳೆ ಉತ್ತಮ ಎಸೆತಗಾರ ಸದ್ದಾಮ್, ಉತ್ತಮ ದಾಂಡಿಗ ಸಿದ್ದೀಕ್ ಹಾಗೂ ಆಲ್ ರೌಂಡರ್ ಪ್ರಶಸ್ತಿ ನವಾಝ್ ಅವರಿಗೆ ನೀಡಿ ಗೌರವಿಸಲಾಯಿತು.