ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವಾರ್ಷಿಕ ಮಹಾಸಭೆ
ಉಳ್ಳಾಲ, ಜ.13: ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ವಾರ್ಷಿಕ ಮಹಾಸಭೆಯು ಕೆಸಿ ನಗರ ಮದ್ರಸ ಹಾಲ್ನಲ್ಲಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಕೆಎಚ್ ಕೆಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಎಸ್ವೈಎಸ್ ಕೆಸಿ ರೋಡ್ ಸೆಂಟರ್ನ ದಆ್ವ ಉಸ್ತುವಾರಿ ಮುಸ್ತಫಾ ಝುಹ್ರಿ ದುಆದೊಂದಿಗೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೆಕ್ಟರ್ ಕಾರ್ಯದರ್ಶಿ ಮುಸ್ತಫಾ ಕೆಸಿ ನಗರ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಶರೀಫ್ ಪೂಮಣ್ಣು ಲೆಕ್ಕ ಪತ್ರ ಮಂಡಿಸಿದರು. ಸೆಕ್ಟರ್ ಉಸ್ತುವಾರಿ ಅನ್ಸಾರ್ ಅಳೇಕಲ ಹಾಗೂ ಸೆಕ್ಟರ್ ಚುನಾವಣಾ ಅಧಿಕಾರಿ ಜಾಫರ್ ಅಳೇಕಲ ಮಾತನಾಡಿದರು.
ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷರಾಗಿ ಇಬ್ರಾಹಿಂ ಕೆಎಚ್ ಕೆಸಿ ರೋಡ್, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಕೆಸಿ ನಗರ, ಕೋಶಾಧಿಕಾರಿಯಾಗಿ ಆಶೀಕ್ ತಲಪಾಡಿ, ಉಪಾಧ್ಯಕ್ಷರಾಗಿ ಸ್ವಾಬಿರ್ ಕೆಸಿ ರೋಡ್, ನೌಷಾದ್ ತಲಪಾಡಿ, ಕಾರ್ಯದರ್ಶಿಯಾಗಿ ಶಾರಿಕ್ ಹೊಸನಗರ, ಅಸ್ಗರ್ ತಲಪಾಡಿ, ಇಲ್ಯಾಸ್ ಪಿಲಿಕೂರು ಆಯ್ಕೆಯಾದರು.
ಎಸ್ಸೆಸ್ಸೆಫ್ ಸೆಕ್ಟರ್ ಸಮಿತಿಯಿಂದ ಎಸ್ವೈಎಸ್ಗೆ ಸೇರಲಿರುವ ಶರೀಫ್ ಪೂಮಣ್ಣು, ಸಿರಾಜ್ ಎಎಚ್, ಇಸ್ಮಾಯಿಲ್ ಕೆಸಿ ನಗರ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಸಿರಾಜ್ ಎಎಚ್ ಕೆಸಿ ನಗರ, ಉಪಾಧ್ಯಕ್ಷ ಇಸ್ಮಾಯಿಲ್ ಕೆಸಿ ನಗರ ಹಾಗೂ ಕಾರ್ಯದರ್ಶಿ ಅನ್ವೀಝ್ ಕೆಸಿ ರೋಡ್ ಉಪಸ್ಥಿತರಿದ್ದರು.