ಉದ್ಯೋಗ ನೀಡದೆ ಸಾವಿರಾರು ರೂ. ಮೋಸ
ಉಡುಪಿ, ಜ.14: ಉದ್ಯೋಗ ನೀಡುವುದಾಗಿ ಹಣ ಪಡೆದು ಮೋಸ ಮಾಡಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡೆಸ್ಟಿನೀ ಪ್ಲೇಸ್ಮೆಂಟ್ ಉದ್ಯೋಗ ಮಾಹಿತಿ ಕೇಂದ್ರದ ಕುಕ್ಕಿಕಟ್ಟೆ ನಿವಾಸಿ ಸುನೈನಾ ಇಕ್ಬಾಲ್(38) ಎಂಬವರು ಸಾಗರ್ ಶೆಟ್ಟಿ ಎಂಬವರಿಗೆ ಸಿಂಗಾಪುರದ ಐಟಿ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವೀಸಾ ಶುಲ್ಕ, ಸ್ಟ್ಯಾಂಪಿಂಗ್ ಶುಲ್ಕ, ವಿಮಾನ ಶುಲ್ಕ ಮತ್ತು ಕಛೇರಿ ಶುಲ್ಕ ಎಂಬುದಾಗಿ 85,000ರೂ. ಪಡೆದಿದ್ದರು. ಆದರೆ ಆಕೆ ಉದ್ಯೋಗ ನೀಡದೆ ಹಣವನ್ನು ವಾಪಾಸು ಕೊಡದೆ ಮೋಸ ವಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆ
ಶಿರ್ವ, ಜ.14: ಮಾನಸಿಕ ಹಾಗೂ ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಜೋನ್ ಡಿಸೋಜ(69) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಜ.13ರಂದು ಬೆಳಗ್ಗೆಯಿಂದ ಮಧ್ಯಾಹ್ನದ ನಡುವಿನ ಅವಧಿಯಲ್ಲಿ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story