ಎರ್ನಾಕುಲಂ-ಓಕಾ ರೈಲಿಗೆ ಬೋಗಿ ಹೆಚ್ಚಳ
ಉಡುಪಿ, ಜ.15: ಎರ್ನಾಕುಲಂ-ಓಕಾ ಮಧ್ಯೆ ಸಂಚರಿಸುವ ಪಾಕ್ಷಿಕ ಹಬ್ಬದ ವಿಶೇಷ ರೈಲಿಗೆ ಮೂರು ಕೋಚ್ಗಳನ್ನು ಶಾಶ್ವತ ವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ಈಗಿರುವ 18 ಬೋಗಿಗಳ ಬದಲು 21 ಬೋಗಿಗಳೊಂದಿಗೆ ರೈಲು ಸಂಚರಿಸಲಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಇವುಗಳಲ್ಲಿ ಒಂದು ಕೋಚ್ 3 ಟಯರ್ ಎಸಿ, ಒಂದು ಸ್ಲೀಪರ್ ಕೋಚ್ ಹಾಗೂ ಇನ್ನೊಂದು ಸೆಕೆಂಡ್ ಸೀಟಿಂಗ್ ಕೋಚ್ ಆಗಿದೆ. ಹೆಚ್ಚುವರಿ ಕೋಚ್ ಗಳೊಂದಿಗೆ ಎರ್ನಾಕುಲಂನಿಂದ ಜ.15 ಹಾಗೂ ಓಕಾದಿಂದ ಜ.16ರಿಂದ ರೈಲು ನಂ. 06338 ಹಾಗೂ 06337 ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story