ವೀಡಿಯೊ ವೈರಲ್ ಮಾಡುವುದಾಗಿ ಮಹಿಳೆಗೆ ಮಾನಸಿಕ ಕಿರುಕುಳ: ದೂರು
ಮಂಗಳೂರು, ಜ.21: ಕಾವೂರಿನ ಮಹಿಳೆಗೆ ನೆರೆಮನೆಯ ವ್ಯಕ್ತಿಯು ವೀಡಿಯೊವೊಂದನ್ನು ವೈರಲ್ ಮಾಡುವುದಾಗಿ ಬೆದರಿ ಸುತ್ತಾ, ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂತ್ರಸ್ತೆಯು ಕಾವೂರಿನಲ್ಲಿ ವಾಸವಿದ್ದು, ಪತಿ ವಿದೇಶದಲ್ಲಿದ್ದಾರೆ. ನೆರೆಮನೆಯ ರವಿರಾಜ್ ಎಂಬವರು ಮಹಿಳೆಗೆ, ‘ನೀನು ಲಾಡ್ಜ್ಗೆ ಹೋದ ವೀಡಿಯೋ ನನ್ನಲ್ಲಿದೆ. ನನ್ನ ಜೊತೆ ಬಾರದಿದ್ದರೆ ವೀಡಿಯೊ ವೈರಲ್ ಮಾಡುವುದಾಗಿ ಫೋನ್ ಮಾಡಿ ಬೆದರಿಸುತ್ತಿದ್ದಾನೆ. ಅಲ್ಲದೆ, ಹಲವು ಬಾರಿ ಮನೆಯೊಳಗೆ ಬಂದು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಸಂತ್ರಸ್ತೆಯು ದೂರಿನಲ್ಲಿ ವಿವರಿಸಿದ್ದಾರೆ.
Next Story