ಮಂಗಳೂರು: ಸಫಿಯಾರಿಗೆ ಗೌರವ ಡಾಕ್ಟರೇಟ್
ಮಂಗಳೂರು, ಜ. 22: ಬರಕಃ ಇಂಟರ್ ನ್ಯಾಷನಲ್ ಸ್ಕೂಲ್ ಆ್ಯಂಡ್ ಕಾಲೇಜು ಇದರ ಮೇಲ್ವಿಚಾರಕಿ ಸಫಿಯಾ ಇವರು ಡಾ. ಜುನೈದ್ ಖಾನ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ "ಹಿಜಾಮ, ಅನ್ಸಿಯೆಂಟ್ ಹೀಲಿಂಗ್ ಥೆರಪಿ ಇನ್ ದಿ ಮೊಡರ್ನ್ ಎರ " ಎಂಬ ಮಾಹಾ ಪ್ರಬಂಧಕ್ಕೆ ಸೈoಟ್ ಮದರ್ ಥೆರೆಸಾ ಯೂನಿವರ್ಸಿಟಿ, ಮೆಲ್ಬೋರ್ನ್ ಆಸ್ಟ್ರೇಲಿಯಾ. ಇವರು ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ಪದವಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ ಡಿ .ಅರ್.ಡಿ. ಓ. ಬೆಂಗಳೂರಿನ ಪ್ರಮುಖ ವಿಜ್ಞಾನಿಗಳು ಭಾಗವಹಿಸಿದ್ದರು. ಇವರು ಕೆ.ಸಿ.ನಗರ. ದಿ. ಮೊಯ್ದಿನ್ ಕುಂಞಿ ಮುಸ್ಲಿಯಾರ್ ಮತ್ತು ಬೀಫಾತಿಮ ಇವರ ಪುತ್ರಿ ಹಾಗೂ ಆಸೀಫ್ ಬದ್ರಿಯಾ ಕೃಷ್ಣಾಪುರ ಇವರ ಪತ್ನಿ.
Next Story