'ನಮ್ಮ ಶಾಲೆಗೆ ನನ್ನ ಕೊಡುಗೆ' : ಕಂಪ್ಯೂಟರ್, ವಿದ್ಯುತ್ ಚಾಲಿತ ಸ್ಯಾನಿಟೈಸರ್, ಸಮವಸ್ತ್ರ ಹಸ್ತಾಂತರ
ಉಡುಪಿ : ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ನಾರ್ತ್ ಇಲ್ಲಿ ''ನಮ್ಮ ಶಾಲೆಗೆ ನನ್ನ ಕೊಡುಗೆ "ಎಂಬ ಶೀರ್ಷಿಕೆಯಲ್ಲಿ ಹಳೆ ವಿದ್ಯಾರ್ಥಿ ಸತೀಶ್ ರಾವ್ ಅವರು ಶಾಲೆಗೆ ಕಂಪ್ಯೂಟರ್, ಮುದ್ರಣ ಯಂತ್ರ, ಪೀಠೋಪಕರಣ ಹಾಗೂ ಸಮವಸ್ತ್ರವನ್ನು ಗುರುವಾರ ಹಸ್ತಾಂತರಿಸಿದರು.
ಹಾಜಿ ಅಬ್ದುಲ್ ಟ್ರಸ್ಟ್ ಇದರ ಇಕ್ಬಾಲ್ ಮನ್ನಾ ಅವರು ವಿದ್ಯುತ್ ಚಾಲಿತ ಸ್ಯಾನಿಟೈಸರ್ ಕೊಡುಗೆಯಾಗಿ ನೀಡಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜನಾರ್ಧನ್ ಭಂಡಾರ್ಕರ್, ಎಸ್ಡಿಎಂಸಿ ಅಧ್ಯಕ್ಷ ಮಲ್ಲಮ್ಮ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದಿಂದ ವಿದ್ಯಾ ಗಮ ಕಾರ್ಯಕ್ರಮ ಎರಡರ ನೋಡಲ್ ಅಧಿಕಾರಿಗಳಾದ ಉಷಾ ಬಿ.ಆರ್.ಪಿ ಮತ್ತು ಬಿ.ಜಿ.ಆರ್.ಟಿ ಸಮನ್ವಯ ಅಧಿಕಾರಿ ಗಂಗೆ ಶಾನ್ ಬಾಗ್ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಸಂತಿ ಬಿ ಸ್ವಾಗತಿಸಿದರು. ಶೋಭಾ ಶೆಟ್ಟಿ ಕಾರ್ಯಕ್ರಮದ ನಿರೂಪಿಸಿದರು. ರೇಣುಕಾಚಾರ್ಯ ವಂದಿಸಿದರು.