ಉಡುಪಿ: ಬುಧವಾರ 2409 ಮಂದಿಗೆ ಕೋವಿಡ್ ಲಸಿಕೆ
ಉಡುಪಿ, ಜ.27: ಬುಧವಾರ ಜಿಲ್ಲೆಯ ಒಟ್ಟು 39 ಕೇಂದ್ರಗಳಲ್ಲಿ ವೈದ್ಯರೂ ಸೇರಿದಂತೆ ನಿಗದಿತ 3493 ಆರೋಗ್ಯ ಕಾರ್ಯಕರ್ತ ರಲ್ಲಿ 2409 ಮಂದಿ ಕೊರೋನಾ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದಾರೆ. ಇದು ದಿನದ ನಿಗದಿತ ಗುರಿಯ ಶೇ.68.966ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್ನ ಮೊದಲ ಹಂತದಲ್ಲಿ ಜಿಲ್ಲೆಯ ಒಟ್ಟು 22,103 ಮಂದಿ ಕೊರೋನಾ ವಾರಿಯರ್ಸ್ಗೆ ಲಸಿಕೆಯನ್ನು ನೀಡುವ ಗುರಿ ಇದೆ. ಇದುವರೆಗೆ ಲಸಿಕೆ ಪಡೆಯಬೇಕಿದ್ದ 16,889 ಮಂದಿಯಲ್ಲಿ 9299 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಶೇ.55.1ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಿಸಿದರು.
Next Story