ಉಡುಪಿ: ಗುರುವಾರ 13 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ
ಉಡುಪಿ, ಜ.28: ಗುರುವಾರ ಜಿಲ್ಲೆಯ ಒಟ್ಟು 13 ಮಂದಿಯಲ್ಲಿ ಕೋವಿಡ್-19ರ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಐವರು ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ ಈಗ 46 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದವರಲ್ಲಿ ಎಂಟು ಮಂದಿ ಪುರುಷರಾದರೆ, ಐವರು ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ ಆರು ಮಂದಿ, ಕುಂದಾಪುರ ತಾಲೂಕಿನ ಇಬ್ಬರು ಮತ್ತು ಕಾರ್ಕಳ ತಾಲೂಕಿನ ಐವರಿದ್ದಾರೆ. ಬುಧವಾರ ಐವರು ಸೋಂಕಿನಿಂದ ಮುಕ್ತರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಗುಣಮುಖರಾದವರ ಒಟ್ಟು ಸಂಖ್ಯೆ ಈಗ 23,066ಕ್ಕೇರಿದೆ.
765 ಮಂದಿ ನೆಗೆಟಿವ್: ಬುಧವಾರ ಜಿಲ್ಲೆಯ 779 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಲ್ಲಿ 765 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 14 ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,301 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,32,122 ಮಂದಿ ಕೋವಿಡ್ ಪರೀಕ್ಷೆಗೊಳ ಗಾಗಿದ್ದಾರೆ. ಇವರಲ್ಲಿ 3,08,821 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್ಗೆ(ಒಟ್ಟು 189) ಯಾರೂ ಬಲಿಯಾಗಿಲ್ಲ.