ಕರಾಟೆ: ಪುತ್ತೂರಿನ ಸಾತ್ವಿಕ್ ಶರ್ಮಾಗೆೆ ಬ್ಲಾಕ್ಬೆಲ್ಟ್
ಪುತ್ತೂರು, ಜೂ.19: ಕರಾಟೆ ಬುಡೋಕಾನ್ ಇಂಟರ್ನ್ಯಾಶನಲ್ನ ವಿದ್ಯಾರ್ಥಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೆ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮಾ ಬ್ಲಾಕ್ಬೆಲ್ಟ್ ಪದವಿ ಪಡೆದಿರುತ್ತಾರೆ.
ಮಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಪರೀಕ್ಷೆಯಲ್ಲಿ ಕರಾಟೆ ಬುಡೋಕಾನ್ನ ರಾಷ್ಟ್ರೀಯ ಅಧ್ಯಕ್ಷ ಸಿ. ಹನುಮಂತ ರಾವ್ ಬ್ಲಾಕ್ಬೆಲ್ಟ್ ಪದವಿಯನ್ನು ನೀಡಿದರು.
ಇವರು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಎಲೈಡ್ ಆರ್ಟ್, ಪುತ್ತೂರು ಡೋಜೋದ ಶಿಹಾನ್ ಎಂ. ಸುರೇಶ್ರ ಶಿಷ್ಯರಾಗಿದ್ದು, ರಾಜೇಶ ಶರ್ಮ ಮತ್ತು ಸೀಮಾ ಶರ್ಮ ದಂಪತಿಯ ಪುತ್ರ.
Next Story