ನಟ ಎಂ.ಕೆ.ಮಠರಿಗೆ ಪಿತೃ ವಿಯೋಗ
ಉಪ್ಪಿನಂಗಡಿ, ಫೆ.10: ಚಲನಚಿತ್ರ ನಟ ಎಂ.ಕೆ.ಮಠ ಅವರ ತಂದೆ ಹಾಜಿ ಕೆ.ಅಬೂಬಕರ್ ಶಾಫಿ(87) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಉಪ್ಪಿನಂಗಡಿ ಸಮೀಪದ ಕೂಟೇಲ್ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಉಪ್ಪಿನಂಗಡಿಯಲ್ಲಿ ಟೈಲರ್ ಆಗಿದ್ದ ಅವರು ಬಳಿಕ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಎಂಬಲ್ಲಿ ಕ್ಲೋತ್ ಸ್ಟೋರ್ ತೆರೆದು ಹಲವು ವರ್ಷಗಳ ಕಾಲ ಹಲವರಿಗೆ ಟೈಲರಿಂಗ್ ಕಲಿಸಿದ್ದರು. ಮಕ್ಕಾ ಯಾತ್ರೆ ಕೈಗೊಂಡಿದ್ದ ಇವರು ಅಲ್ಲೇ ಉಳಿದು ಟೈಲರ್ ವೃತ್ತಿ ಮುಂದುವರಿಸಿದ್ದರು. ಕೆಲವು ವರ್ಷಗಳಿಂದ ವೃತ್ತಿಯನ್ನು ತೊರೆದು ಮನೆಯಲ್ಲೇ ಇದ್ದರು.
ಮೃತರು ಐವರು ಪುತ್ರಿಯರು, ಮೂವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Next Story