ಉಡುಪಿ: ಜಿಲ್ಲೆಯ 10 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ
ಉಡುಪಿ, ಫೆ.21: ರವಿವಾರದಂದು ಉಡುಪಿ ಜಿಲ್ಲೆಯ 10 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಆರು ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ 51 ಆಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ. ಇಂದು ಪಾಸಿಟಿವ್ ಬಂದವರಲ್ಲಿ ಆರು ಮಂದಿ ಪುರುಷರಾದರೆ ನಾಲ್ವರು ಮಹಿಳೆಯರು. ಇವರಲ್ಲಿ ಆರು ಮಂದಿ ಉಡುಪಿ ತಾಲೂಕಿನವರಾದರೆ, ಒಬ್ಬರು ಕುಂದಾಪುರ ಹಾಗೂ ಇಬ್ಬರು ಕಾರ್ಕಳ ತಾಲೂಕಿನವರು. ಒಬ್ಬರು ಮಾತ್ರ ಹೊರಜಿಲ್ಲೆಯಿಂದ ಬಂದವರು. ಶನಿವಾರ ಆರು ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿ ಕೊಂಡವರ ಸಂಖ್ಯೆ ಈಗ 23,284ಕ್ಕೇರಿದೆ.
1284 ಮಂದಿ ನೆಗೆಟಿವ್: ಶನಿವಾರ ಜಿಲ್ಲೆಯ 1292 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಲ್ಲಿ 1284 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ ಎಂಟು ಮಂದಿಯಲ್ಲಿ (ಐಸಿಎಂಆರ್ ವರದಿ) ಸೋಂಕು ಪತ್ತೆಯಾಗಿದೆ. ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,524 ಆಗಿದೆ ಎಂದು ಡಾ.ಸೂಡ ತಿಳಿಸಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,57,960 ಮಂದಿ ಕೋವಿಡ್ ಪರೀಕ್ಷೆಗೊಳ ಗಾಗಿದ್ದಾರೆ. ಇವರಲ್ಲಿ 3,34,436 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್ಗೆ (ಒಟ್ಟು ಬಲಿ 189) ಯಾರೂ ಬಲಿಯಾಗಿಲ್ಲ.