ಉಡುಪಿ: 1341 ಮಂದಿಗೆ ಕೋವಿಡ್ 2ನೇ ಡೋಸ್
ಉಡುಪಿ, ಫೆ.22: ಜಿಲ್ಲೆಯ 1341 ಮಂದಿ ಆರೋಗ್ಯ ಕಾರ್ಯಕರ್ತರು ಸೋಮವಾರ ಕೋವಿಡ್ಗಿರುವ ಕೊವಿಶೀಲ್ಡ್ ಲಸಿಕೆಯ ಎರಡನೇ ಡೋಸ್ನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿರುವ 23889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇದುವರೆಗೆ ಒಟ್ಟು 3558 ಮಂದಿ 28 ದಿನಗಳ ಬಳಿಕ ನೀಡಲಾಗುವ ಎರಡನೇ ಡೋಸ್ನ್ನು ಪಡೆದುಕೊಂಡಂತಾಗಿದೆ. ಈ ಮೂಲಕ ಒಟ್ಟಾರೆಯಾಗಿಶೇ.14.9 ಸಾಧನೆಯಾಗಿದೆ.
ಜಿಲ್ಲೆಯ ವೈದ್ಯರೂ ಸೇರಿದಂತೆ 23,889 ಮಂದಿ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಮೊದಲ ಡೋಸ್ ಲಸಿಕೆಯನ್ನು ಇಂದು 476 ಮಂದಿ ಪಡೆದಿದ್ದು, ಈ ಮೂಲಕ ಇದುವರೆಗೆ ಒಟ್ಟು 16,608 ವುಂದಿ (ಶೇ.69.5) ಲಸಿಕೆ ಪಡೆದಿದ್ದಾರೆ.
ಇದೀಗ ಎರಡನೇ ಹಂತದಲ್ಲಿ ಜಿಲ್ಲೆಯ 4283 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಕೋವಿಡ್ ಲಸಿಕೆಯನ್ನು ಸೋಮವಾರ 178 ಮಂದಿ ಪಡೆಯುವ ಮೂಲಕ ಇಂದಿನವರೆಗೆ ಒಟ್ಟು 2,584 (ಶೇ.60.3) ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಇಲಾಖೆ ತಿಳಿಸಿದೆ.
Next Story