ಗಂಗೊಳ್ಳಿ: ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿ ಬಂಧನ
ಗಂಗೊಳ್ಳಿ, ಫೆ.22: ಹೊಸಾಡು ಗ್ರಾಮದ ಮೋವಾಡಿ ಪೆಟ್ರೋಲ್ ಬಂಕ್ ಹಿಂಭಾಗ ಗೇರು ಹಾಡಿಯಲ್ಲಿ ಫೆ.21ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಖಾದರ್, ಮುಜೀಬ್ ರೆಹೆಮಾನ್, ಹನೀಫ್, ರಮೇಶ, ರಮೇಶ ಹೆರಿಯಣ್ಣ, ಅರುಣ, ರವಿ ಬಂಧಿತ ಆರೋಪಿಗಳು. ಇವರಿಂದ 4,930ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story