ಮಾ. 9-13: ಪೇರಮೊಗರು ಉರೂಸ್
ವಿಟ್ಲ : ಪೇರಮೊಗರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿರುವ ಹಝ್ರತ್ ಘೈಬಾನ್ ಶಾಹ್ ಫೀರ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಮತ್ತು ವಾರ್ಷಿಕ ಸ್ವಲಾತ್ ಕಾರ್ಯಕ್ರಮವು ಮಾ. 9ರಿಂದ 13ರ ತನಕ ನಡೆಯಲಿದೆ.
ಬದ್ರಿಯಾ ಜುಮಾ ಮಸೀದಿಯ ಗೌರವಾಧ್ಯಕ್ಷ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ಬಾಅಲವಿ ತಂಙಳ್ ಗುರುವಾಯನಕೆರೆ ಅಧ್ಯಕ್ಷತೆ ವಹಿಸಲಿದ್ದು, ಪೇರಮುಗೇರ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ದ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಮಸೀದಿಯ ಪ್ರಕಟಣೆ ತಿಳಿಸಿದೆ.
Next Story