ಅಂದರ್ಬಾಹರ್: ಏಳು ಮಂದಿ ಬಂಧನ
ಕೊಲ್ಲೂರು, ಫೆ.24: ಜಡ್ಕಲ್ ಗ್ರಾಮದ ಬಸ್ರೀಬೇರು ಎಂಬಲ್ಲಿರುವ ಹಾಡಿಯಲ್ಲಿ ಫೆ.24ರಂದು ಅಂದರ್ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ವುಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಡ್ಕಲ್ ಗ್ರಾಮದ ಸಿಯಾನ್(35), ಹನಿ ಕೆ.ಕೆ.(46), ಗಿರೀಶ ಟಿ.ಕೆ.(42), ಸಜಿ ಜಾರ್ಜ್(38), ಅನಿಲ್(42), ಮುದೂರು ಗ್ರಾಮದ ಸನೀಶ(36), ಕೊಲ್ಲೂರಿನ ಸಂತೋಷ(38) ಬಂಧಿತ ಆರೋಪಿಗಳು. ಇವರಿಂದ 2,640 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story