ಮಂಗಳೂರು: ಚಿನ್ನ ಅಕ್ರಮ ಸಾಗಾಟ; ಇಬ್ಬರ ಬಂಧನ
ಮಂಗಳೂರು, ಮಾ.5: ವಿಮಾನದ ಮೂಲಕ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಗುಜರಾತಿನ ಕಾಸಿಂ ಇಬ್ರಾಹಿಂ ಕೋಲಾಡ್ ಮತ್ತು ಭಟ್ಕಳ ಮೂಲದ ಮುಹಮ್ಮದ್ ರುಕ್ನುದ್ದೀನ್ ಬಂಧಿತರು. ಇವರು ಅನುಮಾನ ಬಾರದಂತೆ ಮೇಕಪ್ ಫೌಂಡೇಶನ್ ಪಟ್ಟಿಯ ಕೆಳಭಾಗದಲ್ಲಿ ಚಿನ್ನವನ್ನು ಅಂಟಿಸಿ ಸಾಗಾಟ ಮಾಡುತ್ತಿದ್ದರು. ದುಬೈನಿಂದ ಇಂಡಿಗೊ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದು, ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ಒಟ್ಟು 11,00,946 ಲಕ್ಷ ರೂ. ಮೌಲ್ಯದ 238 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story