ಮಹಿಳಾ ದಿನಾಚರಣೆ: ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್
ಉಡುಪಿ, ಮಾ.6: ಮಾ.8ರಂದು ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ ಮಹಿಳೆಯರಿಗಾಗಿ ಎರಡು ವಿಶೇಷ ಆರೋಗ್ಯ ತಪಾಸಣಾ ಪ್ಯಾಕೇಜ್ಗಳನ್ನು ಪರಿಚಯಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ತಿಳಿಸಿದ್ದಾರೆ.
ಮಾ.8ರಿಂದ ಮಾ.13ರ ಶನಿವಾರದವರೆಗೆ ಒಂದು ವಾರ ಕಾಲ ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಇರುವ ಪ್ಯಾಕೇಜ್ನಲ್ಲಿ ಹಿಮೋಗ್ಲೋಬಿನ್, ಕೊಲೆಸ್ಟರಾಲ್, ಥೈರಾಯ್ಡ್ ಪ್ರೊಫೈಲ್ ಮತ್ತಿತರ ಮುಖ್ಯ ರಕ್ತ ಪರೀಕ್ಷೆಗಳು, ಸ್ತನ ಪರೀಕ್ಷೆಗಳನ್ನು ಒಂದು ಸಾವಿರ ರೂ. ಮತ್ತು 40 ವರ್ಷಕ್ಕಿಂತ ಮೇಲ್ಪಟ್ಟವರ ಪ್ಯಾಕೇಜ್ನಲ್ಲಿ ಮೇಲಿನ ಎಲ್ಲ ಪರೀಕ್ಷೆಗಳಲ್ಲದೆ, ಮೂತ್ರ ಪರೀಕ್ಷೆಗಳು, ಎಕ್ಸರೇ, ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆಯನ್ನು 1500 ರೂ.ಗಳಲ್ಲಿ ಮಾಡಲಾಗುತ್ತದೆ.
ಎರಡೂ ಪ್ಯಾಕೇಜ್ಗಳಲ್ಲಿ ಮೆಡಿಸಿನ್, ಸರ್ಜರಿ ಹಾಗೂ ಸ್ತ್ರೀರೋಗ ತಜ್ಞರೊಂದಿಗಿನ ಸಮಾಲೋಚನೆಗಳು ಸಹ ಸೇರಿರುತ್ತವೆ. ಮಹಿಳೆಯರು ಈ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು.ಆಸಕ್ತ ಮಹಿಳೆಯರು ದೂರವಾಣಿ ಸಂಖ್ಯೆ:0820-2942121ಗೆ ಕರೆ ಮಾಡಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ:0820-2526501/02ಗೆ ಕರೆ ಮಾಡಬಹುದು ಎಂದು ಡಾ. ಶಶಿಕಿರಣ್ಉಮಕಾಂತ್ ತಿಳಿಸಿದ್ದಾರೆ.