ಮಂಗಳೂರು : ಕಾಂಚನ ಅಟೋಮೊಬೈಲ್ಸ್ ನಲ್ಲಿ ಮಹಿಳಾ ದಿನಾಚರಣೆ
ಮಂಗಳೂರು : ನಗರದ ಪ್ರತಿಷ್ಠಿತ ಹ್ಯುಂಡೈ ಕಾರಿನ ಅಧಿಕೃತ ಡೀಲರ್ ಕಾಂಚನ ಅಟೋಮೊಬೈಲ್ಸ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.
ಕಾಂಚನಾ ಅಟೋಮೊಬೈಲ್ಸ್ ಇದರ ನಿರ್ದೇಶಕಿ ಸುಕನ್ಯ ಪಿ. ಕಾಂಚನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳಾ ಸಬಳೀಕರಣದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಕಾಂಚನ ಹ್ಯುಂಡೈನ ಹೆಮ್ಮೆಯ ಹಲವಾರು ಮಹಿಳಾ ಗ್ರಾಹಕರು ಭಾಗವಹಿಸಿದರು. ಈ ಸಂದರ್ಭದಲ್ಲಿ ಕಾಂಚನಾ ಹುಂಡೈ ಇದರ ಸೇಲ್ಸ್ ಮೇನೆಜರ್ ಗಣಪತಿ, ಸರ್ವೀಸ್ ಮೇನೆಜರ್ ಜಯ ಕಿಶಾನ್, ಅಕೌಂಟ್ಸ್ ಮೇನೆಜರ್ ಸುದರ್ಶನ್, ವಿಲ್ ಫ್ರೆಡ್ ಮೊದಲಾದವರು ಹಾಜರಿದ್ದರು.
ಚೈತ್ರಾ ಎಸ್ ಸ್ವಾಗತಿಸಿ, ವಿಜೇತಾ ಸಿ ಕಾರ್ಯಕ್ರಮ ನಿರೂಪಿಸಿದರು. ವಾಯ್ಲಿನ್ ಡಿ ಕೋಸ್ತ ವಂದಿಸಿದರು.
Next Story