'D1' ಫ್ರೆಂಡ್ಸ್ ಅಂಗರಗುಂಡಿ : ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಇರ್ಫಾನ್ ಅಂಗರಗುಂಡಿ
ಮಂಗಳೂರು : 'D1' ಫ್ರೆಂಡ್ಸ್ ಅಂಗರಗುಂಡಿ ಇದರ ಮಹಾಸಭೆಯು ಅಂಗರಗುಂಡಿಯ ಕಚೇರಿಯಲ್ಲಿ ಸೋಮವಾರ ನಡೆಯಿತು.
2021-22ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಇರ್ಫಾನ್ ಅಂಗರಗುಂಡಿ, ಉಪಾಧ್ಯಕ್ಷರಾಗಿ ಕಲಂದರ್ ಅಂಗರಗುಂಡಿ, ಕಾರ್ಯದರ್ಶಿಯಾಗಿ ಯಾಸೀರ್ ಅಂಗರಗುಂಡಿ, ಜೊತೆ ಕಾರ್ಯದರ್ಶಿಯಾಗಿ ಇಮ್ರಾನ್ ಅಂಗರಗುಂಡಿ, ಗೌರವಾಧ್ಯಕ್ಷರಾಗಿ ಸಿದ್ದೀಕ್ ಅಂಗರಗುಂಡಿ, ಹಣಕಾಸು ನಿರ್ವಾಹಕರಾಗಿ ಅಕ್ಬರ್ ಅಂಗರಗುಂಡಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು 2020-2021 ನೇ ಸಾಲಿನ ಲೆಕ್ಕ ಮಂಡನೆಯನ್ನು ಅಕ್ಬರ್ ಅವರು ನಿರ್ವಹಿಸಿದರು.
Next Story