ಹಾವು ಕಡಿತಕ್ಕೊಳಗಾಗಿ ಮಹಿಳೆ ಮೃತ್ಯು
ಮಲ್ಪೆ, ಎ.3: ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ಮಹಿಳೆ ವಿಷದ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಶುಕ್ರವಾರ ಪಡುತೋನ್ಸೆ ಗ್ರಾಮದ ಹಾಡಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಹಾಡಿಬೆಟ್ಟು ನಿವಾಸಿ ದಾಸು ಗುರುದಾಸ್ ಎಂಬವರ ಪತ್ನಿ ಸಬಿತಾ(43) ಎಂದು ಗುರುತಿಸಲಾಗಿದೆ.
ತೆಂಗಿನಕಟ್ಟೆಯಲ್ಲಿ ಹುಲ್ಲು ತೆಗೆಯು ತ್ತಿದ್ದ ಇವರ ಕಾಲಿಗೆ ವಿಷಪೂರಿತ ಹಾವು ಕಚ್ಚಿತ್ತೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥ ಗೊಂಡ ಅವರು, ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story