ಕುದ್ರೋಳಿ ಮೌಲಾನಾ ಅಝಾದ್ ಮಾದರಿ ಶಾಲೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಮಂಗಳೂರು, ಎ.6: ಕುದ್ರೋಳಿಯ ಮೌಲಾನಾ ಅಝಾದ್ ಮಾದರಿ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಮಾರಂಭದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲ ಭಟ್, ಮೌಲಾನಾ ಅಝಾದ್ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರತಿಭಾ ಹುಲೇಕಲ್, ಎಸ್.ಡಿ. ಎಂ.ಸಿ.ಅಧ್ಯಕ್ಷ ಅಖ್ತರ್ ಅಲಿ, ಮಾಜಿ ಮ.ನ.ಪಾ ಸದಸ್ಯ ಅಬ್ದುಲ್ ಅಝೀಝ್ ,ದ.ಕ.ಜಿ. ಪಂ.ಉರ್ದು ಶಾಲೆಯ ಮುಖ್ಯೋಪಾ ಧ್ಯಾಯಿನಿ ಅಸ್ಮಾ ಜಬೀನಾ, ಪುತ್ತೂರಿನ ಮೌಲಾನಾ ಅಝಾದ್ ಶಾಲೆಯ ಮುಖ್ಯೋಪಾಧ್ಯಾಯ ವಿರೂಪಾಕ್ಷ, ಮನಪಾ ಸದಸ್ಯ ಸಂಶುದ್ದೀನ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮಹಾಬ ಲೇಶ್ವರ ನಾಯ್ಕ್ ಸ್ವಾಗತಿಸಿದರು. ಮಾಜಿ ಮುಖ್ಯೋಪಾಧ್ಯಾಯ ಮೊಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು. ಮೌಲಾನಾ ಮುಪ್ತಿ ಅಬುಲ್ ಮನ್ನಾನ್ ಪ್ರಾರ್ಥಿಸಿದರು.
Next Story