ಕಾಸರಗೋಡು : ಸಮುದ್ರದಲ್ಲಿ ಮುಳುಗಿ ಬಾಲಕ ಮೃತ್ಯು
ಅಜ್ಮಲ್
ಕಾಸರಗೋಡು : ಸಹಪಾಠಿಗಳ ಜೊತೆ ಸಮುದ್ರದಲ್ಲಿ ಸ್ನಾನಕ್ಕಿಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಞ೦ಗಾಡ್ ಕಡಪ್ಪುರದಲ್ಲಿ ಶುಕ್ರವಾರ ನಡೆದಿದೆ.
ವಡಗರ ನಿವಾಸಿ ಝಕರಿಯಾ ಅವರ ಪುತ್ರ ಅಜ್ಮಲ್ (14) ಮೃತ ಬಾಲಕ. ಗುರುವಾರ ಸಂಜೆ ಆರು ಮಂದಿ ಸಹಪಾಠಿಗಳ ಜೊತೆ ಸ್ನಾನಕ್ಕಿದಿದ್ದು, ಅಲೆಗಳ ಅಬ್ಬರಕ್ಕೆ ಸಿಲುಕಿ ಅಜ್ಮಲ್ ನೀರುಪಾಲಾಗಿದ್ದನು. ಸಮುದ್ರ ಪಾಲಾಗಿದ್ದ ಅಜ್ಮಲ್ ಗಾಗಿ ಗುರುವಾರ ಸಂಜೆಯಿಂದ ಶೋಧ ನಡೆಸಿದ್ದು, ಶುಕ್ರವಾರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story