ಮೀನು ಕಟ್ಟಿಂಗ್ ಫ್ಯಾಕ್ಟರಿಯ ಸೊತ್ತು ಕಳವು
ಬ್ರಹ್ಮಾವರ, ಎ.20: ಹಾರಾಡಿ ಗ್ರಾಮದ ಗಾಂಧಿನಗರ ಹೊಳೆಬದಿ ರಸ್ತೆಯ ಹತ್ತಿರ ಇರುವ ಮೀನು ಕಟ್ಟಿಂಗ್ ಫ್ಯಾಕ್ಟರಿಗೆ ಎ.12ರಿಂದ 18ರ ಮಧ್ಯಾವಧಿ ಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕವು ಮಾಡಿರುವ ಬಗ್ಗೆ ವರದಿಯಾಗಿದೆ.
ಕೆಲವು ಸಮಯಗಳಿಂದ ತಾತ್ಕಾಲಿಕವಾಗಿ ಮುಚ್ಚಿದ್ದ ಖತೀಬ್ ಮುಹಮ್ಮದ್ ಆಸೀಂ ಹಾಗೂ ಇತರ ಮೂರು ಪಾಲುದಾರರ ಈ ಫ್ಯಾಕ್ಟರಿಯ ಮುಖ್ಯದ್ವಾರಕ್ಕೆ ಬೀಗ ಮುರಿದು ಒಳನುಗ್ಗಿದ ಕಳ್ಳರು, ಜನರೇಟರ್, 4 ಫಿಶ್ ಕಟ್ಟಿಂಗ್ ಟೇಬಲ್, ಗ್ಯಾಸ್ ಸಿಲಿಂಡರ್, ಪ್ಲೇಟ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು 1,31,250ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story