ಉಡುಪಿ ಸುಲ್ತಾನ್ ಗೋಲ್ಡ್ನಲ್ಲಿ ‘ಡೈಮಂಡ್ ನೆಕ್ಲೆಸ್ ಫೆಸ್ಟ್’ಗೆ ಚಾಲನೆ
ಉಡುಪಿ, ಎ.21: ಉಡುಪಿ ನಗರದ ವಿಎಸ್ಟಿ ರಸ್ತೆಯ ಗೀತಾಂಜಲಿ ಸಿಲ್ಕ್ಸ್ ಬಳಿ ಇರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ನಲ್ಲಿ ಎ.30 ರವರೆಗೆ ಹಮ್ಮಿಕೊಳ್ಳಲಾದ ಡೈಮಂಡ್ ನೆಕ್ಲೆಸ್ ಫೆಸ್ಟ್ ಎ.20ರಂದು ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಂದಳಿಕೆಯ ಸರಳ ವುಡ್ಸ್ನ ಮಾಲಕ ಸುಹಾಸ್ ಹೆಗ್ಡೆ ದಂಪತಿ, ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಪರಿಚಯಿಸಲ್ಪಡುತ್ತಿರುವ ಡೈಮಂಡ್ ನೆಕ್ಲೆಸ್ನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಹೊಸ ಡೈಮಂಡ್ ಸಂಗ್ರಹಗಳನ್ನು ಮತ್ತು ಸೌಮ್ಯ ಶೆಟ್ಟಿ ಬೆಳ್ಮಣ್, ಬೈಂದೂರಿನ ವೀಣಾ, ರೇಖಾ, ಭಾರತಿ ಅನಾವರಣಗೊಳಿಸಿದರು.
ಸುಲ್ತಾನ್ ಗೋಲ್ಡ್ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಫ್ಲೋರ್ ಮೆನೇಜರ್ ಸಿದ್ಧೀಕ್ ಹಸನ್ ಕಾರ್ಯಕ್ರಮ ನಿರೂಪಿಸಿದರು. ಪಿಆರ್ಓ ಮಂಜುನಾಥ್ ಅಮೀನ್ ವಂದಿಸಿದರು. ಅಸಿಸ್ಟೆಂಟ್ ಸೇಲ್ಸ್ ಮೆನೇಜರ್ಗಳಾದ ಶಮಿಲ್ ಅಬ್ದುಲ್ ಖಾದರ್, ನಝೀರ್ ಅಡ್ಡೂರ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
Next Story