ಶಿರ್ವ ಗ್ರಾಪಂ ಅಧ್ಯಕ್ಷ ಚುನಾವಣೆ: ಕಾಂಗ್ರೆಸ್ಗೆ ಒಲಿದ ಅಧ್ಯಕ್ಷ ಸ್ಥಾನ
ಶಿರ್ವ, ಎ.21: ಬಿಜೆಪಿ ಬೆಂಬಲಿತ ಗ್ರೆಗೋರಿ ಕೊನ್ರಾಡ್ ಕ್ಯಾಸ್ತಲಿನೋ ಅವರ ನಿಧನದಿಂದ ತೆರವಾಗಿದ್ದ ಶಿರ್ವ ಗ್ರಾಪಂ ಅಧ್ಯಕ್ಷ ಸ್ಥಾನ ಇದೀಗ ಕಾಂಗ್ರೆಸ್ ಪಾಲಾಗಿದೆ.
ಶಿರ್ವ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಂಟಕಲ್ಲು ವಾರ್ಡ್ನ್ನು ಸತತ ಐದನೆ ಬಾರಿಗೆ ಪ್ರತಿನಿಧಿಸುತ್ತಿರುವ ಸಾಮಾಜಿಕ ಕಾರ್ಯ ಕರ್ತ ಕೆ.ರಾಮರಾಯ ಪಾಟ್ಕರ್ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯೆ 19 ಇದ್ದಾಗ ಅನಿರೀಕ್ಷಿತ ಬೆಳವಣಿಗೆಯಿಂದ ಅಧ್ಯಕ್ಷಗಾದಿ ಬಿಜೆಪಿ ಬೆಂಬಲಿತ ಕೊನ್ರಾರ್ಡ್ ಕೆಸ್ತಲಿನೊ ಪಾಲಾಗಿತ್ತು. ಅವರ ಆಕಸ್ಮಿಕ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದು ಪಾಟ್ಕರ್, ಎದುರಾಳಿ ಬಿಜೆಪಿ ಬೆಂಬಲಿತ ಸದಸ್ಯ ಪ್ರವೀಣ್ ಸಾಲ್ಯಾನ್ ವಿರುದ್ಧ 18-16 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದರು. ಶಿರ್ವ ಗ್ರಾಪಂ ಒಟ್ಟು 34 ಸದಸ್ಯ ಬಲ ಹೊಂದಿದೆ. ಮೀನು ಗಾರಿಕಾ ಇಲಾಖೆಯ ಸಚಿನ್ ಚುನಾವಣಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದ್ದರು.
Next Story