ಭಟ್ಕಳ: ಕರ್ಫ್ಯೂ ಉಲ್ಲಂಘನೆ ಆರೋಪ; 25ಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶ
ಭಟ್ಕಳ : ಕರ್ಫ್ಯೂ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಪೊಲೀಸರು ಮಂಗಳವಾರ ಸುಮಾರು 25ಕ್ಕೂ ಹೆಚ್ಚು ಬೈಕ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.
ನಗರದ ಹಳೆ ಬಸ್ ನಿಲ್ದಾಣ, ಶಂಸುದ್ದೀನ್ ವೃತ್ತ ಮತ್ತಿತರರ ಕಡೆಗಳಲ್ಲಿ ಬೈಕ್ ಸವಾರರನ್ನು ನಿಲ್ಲಿಸಿ ಸರಿಯಾದ ಕಾರಣವಿದ್ದವರನ್ನು ಮಾತ್ರ ಬಿಡುತ್ತಿದ್ದು ಕಂಡು ಬಂದಿದ್ದು ಯಾವುದೇ ಕಾರಣವಿಲ್ಲದೆ ಓಡಾಡುತ್ತಿದ್ದವರ ಬೈಕ್ ಕೀ ಯನ್ನು ಪಡೆದು ಬೈಕ್ ಗಳನ್ನು ಠಾಣೆಗೆ ತೆಗೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಕೆಲವು ನಮಗೆ ಜರೂರು ಕೆಲಸ ಇರುವುದರಿಂದಾಗಿ ಬಂದಿದ್ದೇವೆ. ಆದರೂ ನಮಗೆ ವಿನಾಕಾರಣ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Next Story