ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ದ.ಕ.ಜಿಲ್ಲೆಯಲ್ಲಿ 78 ವಾಹನಗಳು ವಶ
ಮಂಗಳೂರು, ಮೇ 4: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 24 ಕೇಸು ದಾಖಲಿಸಲಾಗಿದೆ. ಅಲ್ಲದೆ 806 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 78 ವಾಹನ ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 21, ಮಾಸ್ಕ್ ಉಲ್ಲಂಘನೆ 476 ಕೇಸ್, ರಾಷ್ಟ್ರೀಯ ವಿಪತ್ತು ಉಲ್ಲಂಘನೆ 27 ಮತ್ತು 57 ದ್ವಿಚಕ್ರ, 1 ತ್ರಿಚಕ್ರ, 6 ನಾಲ್ಕು ಚಕ್ರದ ವಾಹನ ಸಹಿತ 64 ವಾಹನ ವಶಪಡಿಸಲಾಗಿದೆ.
ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯ 2 ಕೇಸ್, ಮಾಸ್ಕ್ ಉಲ್ಲಂಘನೆಯ 330 ಪ್ರಕರಣ ದಾಖಲಿಸಲಾ ಗಿದೆ. 14 ವಾಹನ ವಶಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story