ಐ.ಎಸ್.ಎಫ್. ಅಲ್ ಹಸಾ ಬ್ಲಾಕ್ ಕಾರ್ಯದರ್ಶಿ ಹುಸೈನ್ ಜೋಕಟ್ಟೆ ನಿಧನ
ಮಂಗಳೂರು, ಮೇ 5: ಇಂಡಿಯನ್ ಸೋಶಿಯಲ್ ಫೋರಂ(ಐ.ಎಸ್.ಎಫ್.), ಕರ್ನಾಟಕ ಇದರ ದಮ್ಮಾಮ್ ನ ಅಲ್ ಹಸಾ ಬ್ಲಾಕ್ ಕಾರ್ಯದರ್ಶಿ ಹುಸೈನ್ ಜೋಕಟ್ಟೆ(54) ಅಲ್ ಹಸಾದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾಗಿದ್ದ ಇವರು, ಕಳೆದ ಕೆಲವು ದಿನಗಳಿಂದ ಅಲ್ ಹಸಾದ ಆಸ್ಪತ್ರೆಯೊಂದರಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರು ಪತ್ನಿ, ನಾಲ್ವರು ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಲ್ ಹಸಾದ ಪೆಪ್ಸಿಕೊ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಐ.ಎಸ್.ಎಫ್.ನಲ್ಲಿ ಸಕ್ರಿಯರಾಗಿದ್ದರು. ಸೌದಿ ಅರೇಬಿಯಾದಲ್ಲಿ ಸಂಕಷ್ಟದಲ್ಲಿದ್ದ ಅನಿವಾಸಿಗಳ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದರು. ಜೋಕಟ್ಟೆ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ (JAMWA) ನ ಪೂರ್ವ ಪ್ರಾಂತ್ಯ ಘಟಕ ಮತ್ತು ಇಂಡಿಯಾ ಫ್ರಟರ್ನಿಟಿ ಫೋರಂ (ಐ.ಎಫ್.ಎಫ್.)ನಲ್ಲಿ ಸಕ್ರಿಯರಾಗಿದ್ದರು.
ಮೃತರ ದಫನ ಕಾರ್ಯವು ಸೌದಿಯ ಅಲ್ ಹಸಾದಲ್ಲೇ ನೆರವೇರಲಿದೆ ಎಂದು ಐ.ಎಸ್.ಎಫ್. ತಿಳಿಸಿದೆ.
ಹುಸೈನ್ ಜೋಕಟ್ಟೆ ನಿಧನಕ್ಕೆ ಐ.ಎಸ್.ಎಫ್., ಐ.ಎಫ್.ಎಫ್ ಮತ್ತು . ಜೋಕಟ್ಟೆ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.