ಮಂಗಳೂರು: ಹೋಪ್ ಫೌಂಡೇಶನ್ ವತಿಯಿಂದ ಆಸ್ಪತ್ರೆಗಳಲ್ಲಿರುವ ರೋಗಿಗಳು, ಜೊತೆಗಾರರಿಗೆ ಊಟ ವಿತರಣೆ
'ಹೆಸರು ನೋಂದಾಯಿಸಲು ಮನವಿ'
ಮಂಗಳೂರು : ಹೋಪ್ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಲಾಕ್ ಡೌನ್ ಅವಧಿಯಲ್ಲಿ ಮಂಗಳೂರು ನಗರ ವ್ಯಾಪ್ತಿಯೊಳಗಿನ ಆಸ್ಪತ್ರೆಗಳಲ್ಲಿರುವ ರೋಗಿಗಳು ಹಾಗೂ ರೋಗಿಗಳ ಜೊತೆಗಾರರಿಗೆ ಮಧ್ಯಾಹ್ನ, ರಾತ್ರಿಯ ಊಟ ವಿತರಿಸಲಿದೆ.
ಮಧ್ಯಾಹ್ನದ ಊಟಕ್ಕಾಗಿ ಸ್ಥಳ ಮತ್ತು ಜನರ ಲೆಕ್ಕವನ್ನು ಬೆಳಗ್ಗೆ 10 ಗಂಟೆಯೊಳಗೆ ಮತ್ತು ರಾತ್ರಿಯ ಊಟಕ್ಕಾಗಿ ಅಂದು ಸಂಜೆ 4 ಗಂಟೆಯ ಮೊದಲು ತಿಳಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಹೆಸರು ನೋಂದಾಯಿಸಲು ಹಬೀಬ್: 8151061234, ಮುನಾಫಿಲ್: 9743434326 ಅವರನ್ನು ಸಂಪರ್ಕಿಸಲು ಹೋಪ್ ಫೌಂಡೇಶನ್ ಇದರ ಸೈಫ್ ಸುಲ್ತಾನ್ ತಿಳಿಸಿದ್ದಾರೆ.
Next Story