ಕಾಸರಗೋಡು : ಸಶಸ್ತ್ರ ಮೀಸಲುಪಡೆಯ ಸಬ್ ಇನ್ಸ್ ಪೆಕ್ಟರ್ ಕೋವಿಡ್ ಗೆ ಬಲಿ
ಕಾಸರಗೋಡು : ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್ ಪೆಕ್ಟರ್ ರೋರ್ವ ಕೋವಿಡ್ ನಿಂದ ಮೃತಪಟ್ಟಿದ್ದಾರೆ.
ಕಾಸರಗೋಡು ವಿದ್ಯಾನಗರದ ಸಶಸ್ತ್ರ ಮೀಸಲು ಪಡೆಯ ವಸಂತ ಕುಮಾರ್ (52) ಕೊರೋನದಿಂದ ಮೃತಪಟ್ಟಿದ್ದಾರೆ. ಕಾಞ೦ಗಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಮೃತಪಟ್ಟರು.
ಮೇ 13ರಂದು ಕೊರೋನ ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ವಸಂತ ಕುಮಾರ್ ಅವರನ್ನು ಆರೋಗ್ಯ ಹದೆಗೆಟ್ಟ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಪಾಸಣೆ ನಡೆಸಿದಾಗ ನ್ಯುಮೋನಿಯಾ ಕಂಡು ಬಂದಿತ್ತು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಯಾಗಿದ್ದ ವಸಂತ ಕುಮಾರ್, 1995ರಲ್ಲಿ ಸೇವೆಗೆ ಪ್ರವೇಶಿಸಿದ್ದರು.
Next Story