ಉಡುಪಿ -ಮಣಿಪಾಲದಲ್ಲಿ ನೂರರ ಗಡಿ ದಾಟಿದ ಪೆಟ್ರೋಲ್ ಬೆಲೆ
ಉಡುಪಿ, ಜೂ.20: ಪೆಟ್ರೋಲ್ ದರ ದಿನೇ ದಿನೇ ಏರುತ್ತಿದ್ದು, ಮಣಿಪಾಲ, ಉಡುಪಿ ಕೆಲವೆಡೆ ಇದೇ ಮೊದಲ ಬಾರಿಗೆ ರವಿವಾರ ಒಂದು ಲೀಟರ್ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ.
ಮಣಿಪಾಲದ ಪೆಟ್ರೋಲ್ ಬಂಕ್ನಲ್ಲಿ ಜೂ.19ರಂದು ಇದ್ದ 99.73ರೂ. ಇಂದು 100.03ಕ್ಕೆ ಏರಿಕೆಯಾಗಿದೆ. ಅದೇ ರೀತಿ ಉಡುಪಿ ನಗರದ ಹೊರ ಭಾಗದ ಕೆಲವು ಪೆಟ್ರೋ್ ಬಂಕ್ಗಳಲ್ಲಿ 100ರೂ. ಗಡಿ ದಾಟಿದೆ.
ನಗರದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಇಂದಿನ ಲೀಟರ್ ಒಂದರ ದರ 99.96ರೂ. ಆಗಿದೆ. ನಾಳೆ ನಗರದಲ್ಲೂ 100ರೂ. ಆಗುವ ಸಾಧ್ಯತೆಗಳಿವೆ. ಕುಂದಾಪುರ, ಹೆಬ್ರಿಯಲ್ಲಿ ಎರಡು ದಿನಗಳ ಹಿಂದೆಯೇ ಪೆಟ್ರೋಲ್ ಬೆಲೆ 100ಕ್ಕೆ ಏರಿಕೆಯಾಗಿದೆ.
Next Story