ಕಡಂಬು: ಕೊರೋನ ಸೋಂಕಿತ ಕುಟುಂಬಕ್ಕೆ ಎಸ್ ಡಿಪಿಐ ನಿಂದ ನೆರವು
ವಿಟ್ಲ: ಕೊರೋನ ಸೋಂಕಿಗೆ ಒಳಗಾದ ಕುಟುಂಬಕ್ಕೆ ಗ್ರಾಮ ಪಂಚಾಯತ್ ಸದಸ್ಯ ಮಹ್ಮೂದ್ ಕಡಂಬು ನೇತೃತ್ವದಲ್ಲಿ ಎಸ್ ಡಿಪಿಐ ಕಡಂಬು ಘಟಕದ ಸದಸ್ಯರು ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ನೆರವಾಗಿದ್ದಾರೆ.
ವಿಟ್ಲ ಪಡ್ನೂರು ಗ್ರಾಮದ 6ನೇ ವಾರ್ಡ್ ನ ಕಡಂಬು-ಬೆದ್ರಕ್ಕಾಡು ಪರಿಸರದಲ್ಲಿ ಕೊರೋನ ಸೋಂಕಿನಿಂದಾಗಿ ಸೀಲ್ ಡೌನ್ ಆಗಿದ್ದ ಮನೆಗಳಿಗೆ ಎಸ್ ಡಿಪಿಐ ಕಡಂಬು ಘಟಕದ ಸದಸ್ಯರು ದಿನಸಿ ಕಿಟ್ ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ನೆರವಾದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ಕಡಂಬು ಘಟಕದ ಅಧ್ಯಕ್ಷ ಖಾದರ್ ಬೆದ್ರಕ್ಕಾಡು ಹಾಗೂ ಹೈದರ್ ಅಲಿ ಎ.ಬಿ , ಸತ್ತಾರ್, ನವಾಝ್ ಬಿ.ಕೆ ಉಪಸ್ಥಿತರಿದ್ದರು.
Next Story