ಜುಗಾರಿ : ಆರು ಮಂದಿ ಬಂಧನ
ಗಂಗೊಳ್ಳಿ, ಜು.8: ಗುಜ್ಜಾಡಿ ಗ್ರಾಮದ ಕೊಡಪಾಡಿ ಭಾರತ್ ನಗರ ಎಂಬಲ್ಲಿ ಜು.6ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯರಾದ ರವಿ (30), ಪ್ರಶಾಂತ (29), ನಾಗೇಶ (39), ಇಸ್ಮಿಲ್ಲಾ (27), ಪ್ರದೀಪ (29), ರಮೇಶ (31) ಬಂಧಿತ ಆರೋಪಿ ಗಳು. ಇವರಿಂದ 1,020ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story