ಪಿಎಫ್ಐ ಫರಂಗಿಪೇಟೆ ವಲಯ ವತಿಯಿಂದ ಸ್ಪೋರ್ಟ್ಸ್ ಮೀಟ್
ಫರಂಗಿಪೇಟೆ, ಜು. 11: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ವಲಯ ವತಿಯಿಂದ ರವಿವಾರ ಸ್ಪೋಟ್ಸ್ ಮೀಟ್ ನಡೆಯಿತು.
ಈ ಸಂದರ್ಭದಲ್ಲಿ ಕ್ರೀಡಾಳುಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಮ್ ಕೆ ಸ್ವಸ್ಥ ಸಮಾಜಕ್ಕಾಗಿ ಶಾರೀರಿಕ ಮತ್ತು ಮಾನಸಿಕವಾಗಿ ತರಬೇತುಗೊಂಡ ಸಕ್ರಿಯ ಕಾರ್ಯ ಕರ್ತರ ಸ್ವಯಂ ಸೇವಾ ಕೊಡುಗೆ ಸಮಾಜಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಸಮಾಜದ ಬದ ಲಾವಣೆಗಾಗಿ ಸಮರ್ಪಣಾ ಮನೋಭಾವದ ಸಕ್ರಿಯ ಕಾರ್ಯಕರ್ತರನ್ನಾಗಿಸಲು ಪ್ರಯತ್ನಿಸುತ್ತಿದೆ ಎಂದರು
ವಿವಿಧ ಕ್ರೀಡೆಗಳಲ್ಲಿ ನೌಶಾದ್ ಮಾರಿಪ್ಪಳ್ಳ ನೇತೃತ್ವದ ತಂಡ ಪ್ರಥಮ ಸ್ಥಾನ ಪಡೆಯಿತು. ರವೂಫ್ ಪೇರಿ ಮಾರ್ ತಂಡ ದ್ವಿತೀಯ ಸ್ಥಾನ ಪಡೆದರೆ, ಲತೀಫ್ ಮಾರಿಪ್ಪಳ್ಳ ತಂಡ ತೃತೀಯ ಸ್ಥಾನ ಪಡೆಯಿತು.
ಪಿಎಫ್ಐ ವಲಯಾಧ್ಯಕ್ಷ ನಝೀರ್ ಕುಂಜತ್ಕಳ, ಫರಂಗಿಪೇಟೆ ಅಧ್ಯಕ್ಷ ಬಶೀರ್ ಆಮೆಮ್ಮಾರ್, ಮಾರಿಪ್ಪಳ್ಳ ಅಧ್ಯಕ್ಷ ಅನ್ಸಾರ್ ಆಮೆಮ್ಮಾರ್ ಮತ್ತಿತರರು ಉಪಸ್ಥಿತರಿದ್ದರು
Next Story