ಬಂಟ್ವಾಳ: ಅತ್ಯಾಚಾರ ಆರೋಪ; ಯುವಕನ ಬಂಧನ
ಬಂಟ್ವಾಳ, ಜು.13: ವಿವಾಹಿತ ಮಹಿಳೆಯನ್ನು ಅತ್ಯಾಚಾರ ಮತ್ತು ಬೆದರಿಕೆ ಹಾಕಿರುವ ಆರೋಪದಲ್ಲಿ ಯುವಕನೊಬ್ಬನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮುಹಮ್ಮದ್ ಅಯ್ಯೂಬ್ ಬಂಧಿತ ಆರೋಪಿ. ಈತ ತಲಪಾಡಿಯ ವಿವಾಹಿತ ಮಹಿಳೆ ಒಬ್ಬರನ್ನು ಇನ್ ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡು ತನ್ನನ್ನು ಪ್ರೀತಿಸುತ್ತೇನೆ ಮತ್ತು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದನ್ನು ಮಹಿಳೆ ನಿರಾಕರಿಸಿದರೂ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇತ್ತೀಚಿಗೆ ಕಾರ್ಯ ನಿಮಿತ್ತ ಬಿ.ಸಿ.ರೋಡ್ ಗೆ ಬಂದ ಮಹಿಳೆಯನ್ನು ತನ್ನ ಕಾರಿನಲ್ಲಿ ಬಲವಂತವಾಗಿ ಕೂರಿಸಿ ಮಂಗಳೂರು ಭಾಗದಲ್ಲಿ ಸುತ್ತುವರಿದು ಮೊಬೈಲ್ ನಲ್ಲಿ ಫೋಟೊಗಳನ್ನು ತೆಗೆದು ಬಳಿಕ ತಲಪಾಡಿಯಲ್ಲಿ ಬಿಟ್ಟುಹೋಗಿದ್ದ. ಆ ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ವಿಷಯ ಯಾರಲ್ಲೂ ಹೇಳಿದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹಿಳೆಯ ದೂರಿನಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ